ಇಳಿ ಸಂಜೆಯ ಮನಸು….

ಇಳಿ ಸಂಜೆಯ ಮನಸು….


ದೂರದೂರಿನ ಪಯಣ

ಕಾಣದ ಮನೆಯ ದಾರಿ

ನನ್ನವರ ಆಸರೆಯ ಕನವರಿಕೆ!

 

ದಣಿವರಿಯದ ದೇಹ

ಮಂಕು ಕವಿದ ಮನಸು

ಹಸಿವ ನೀಗಿಸೋ ಬದುಕು!

 

ವಯೋ ನೀರಿಗೆಯೇ ಆಭರಣ

ನೋವಿನಂಚಿನ ನಗುವೇ ಭೂಷಣ

ಸವೆದ ಚಪ್ಪಲಿ-ಬಿರಿತ ಹಿಮ್ಮಡಿಯ ಸಮಾಗಮ!

 

ಕರಗುತ್ತಿರುವ ಕನಸುಗಳ ಕನವರಿಕೆ

ನನ್ನವರ ಆಸರೆಯ ಕನವರಿಕೆ!!

---------------------------------------------------------------------------------------------------------------------------------------------------------------------------------
 ದೇವಸ್ಥಾನದ ಎದುರಿಗೆ ಆಟಿಕೆಗಳನ್ನು ಮಾರುತ್ತಿದ್ದ ವೃದ್ಧೆಯ ಬಗ್ಗೆ ಕೆಲವು ಸಾಲುಗಳು .

Comments

Post a Comment