ನಮ್ಮ ಬೆಂಗಳೂರು
ತಿಳಿ ಧೂಳ ತಂಗಾಳಿ ತುಂಬಿದೆ ಬೆಂಗಳೂರಲ್ಲಿ
ಟ್ರಾಫಿಕ್ ಸಿಗ್ನಲ್ ನ ಚೆಲ್ಲಾಟ, ಪುಂಡರ ಕಳ್ಳಾಟ
ಕ್ಯಾಬ್ ಆಟೋ ಬಸ್ ಗಳ ಹಾರ್ನ್ ಹಾವಳಿ
ಸಿಕ್ಕ ಜಗದಲಿ ತೂರಿಕೊಳ್ಳುವ ಬೈಕ್ ಖಯಾಲಿ
ತುಂತುರು ಮಳೆಯ ಸೊಳ್ಳೆಗಳು
ಮಳೆಗಾಲದಿ ಕಂಡು ಕಾಣದ ತಗ್ಗು ಗುಂಡಿಗಳು
MNCಗಳ diodrant ಘಾಟು, ಅರಿತು
ಅರಿಯದ ಮಾಯೆಗಳು
ಕೀ ಬೋರ್ಡ್ ಸದ್ದಲ್ಲಿ ಮಂಕಾದ ಹೃದಯ ಬಡಿತಗಳು
ಕಂಗ್ಲಿಷ್ ಕಲಿಕೆಯ ಮೋಹವೋ
ಕನ್ನಡ ಮರೆತ ಯಾತನೆಯೋ
ಸದ್ದಿಲ್ಲದೇ ಬೀಸುತಿದೆ ತಂಗಾಳಿ
ತಿಳಿ ಧೂಳು ತುಂಬಿದ ಬೆಂಗಳೂರಲ್ಲಿ!!
---------------------------------------------------------------------------------------------------------------------------
ನಮ್ಮ ಸುಂದರ ಬೆಂಗಳೂರಿನ ಸಧ್ಯದ ಸ್ಥಿತಿ, ಪ್ರತ್ಯಕ್ಷವಾಗಿಯೋ ಅಥವಾ ಪರೋಕ್ಷವಾಗಿಯೋ ನಾವೆಲ್ಲರೂ ಅದಕ್ಕೆ ಕಾರಣ….
Comments
Post a Comment