ಬಾಲ್ಯದ ಪುಟಗಳ ನಡುವೆ!!



ಬಾಲ್ಯದ ಪುಟಗಳ ನಡುವೆ!!
ಒಂದು, ಎರಡು ಬಾಳೆಲೆ ಹರಡು,
ತಾಯಿ ಶಾರದೆ ಲೋಕ ಪೂಜಿತೆಯಿಂದ ಶುರುವಾದ ದಿನಗಳು
ಬಿಳಿ ಶರ್ಟ್  ಕೆಂಪು ಪ್ಯಾಂಟ್, ಟೈ ಗೆ ಅಂಟಿದ ಬ್ಯಾಡ್ಜ್
ಅಪರೂಪಕ್ಕೆ ಪಾಲಿಶ್ ಕಾಣ್ತಿದ್ದ ಕರಿ ಶೂಗಳು, ಎಲೆಸ್ಟಿಕ್ loose ಆದ socksಗಳು..
Court ಎದುರಿಗಿನ ಖಡಕ್ march past!!
*ವಿದ್ಯಾಭಾರತಿ ಶಾಲೆಯ ಅರಳಿದ ಹೂಗಳು ನಾವು *

ಜೀವನದ ಪಾಠಗಳ ಮುಂದೆ ಕಷ್ಟವಾದ ಗಣಿತ ಕೂಡ ಸುಲಭವೆನಿಸಿತೇ!
Science notes, ಸಮಾಜದ ಪಾಠಗಳ ಮಧ್ಯೆ "ತಿಳಿತಾ ತಿಳಿತಾ ತಿಳಿತಾ"!!
*ವಿದ್ಯಾಭಾರತಿ ಶಾಲೆಯ ಅರಳಿದ ಹೂಗಳು ನಾವು *

Class ಹೊರಗೆ, desk ಮೇಲೆ ನಿಂತ punishment, ಮಳೆಯಲಿ ಮಂಡಿ ಹಚ್ಚಿ ನಡೆದದ್ದು
ಕೋಲು, duster, wire ಹೊಡೆತದ ಬಾರುಗಳು,
" ಜೀವನದಾಗ ಉದ್ಧಾರ ಆಗಂಗಿಲ್ಲೇ ನೀವು ಅಂದಿದ್ದು", ಜೀವನದ ಶಿಸ್ತಿಗೆ ಅಡಿಪಾಯ ಆಯ್ತು...
*ವಿದ್ಯಾಭಾರತಿ ಶಾಲೆಯ ಅರಳಿದ ಹೂಗಳು ನಾವು *



Betಕಟ್ಟಿ cricket ಆಡಿದ್ದು, ಮಳೆ ಕೆಸರಲ್ಲಿ football ಆಡಿದ್ದು,

ಓಡಿದ್ದಕ್ಕಿಂತ ಬಿದ್ದಿದ್ದೆ ಹೆಚ್ಚು AC ground ಲಿ
ನಿಂತರು ಕುಂತರು ಖೋ ಖೋ ಕಬ್ಬಡ್ಡಿ
"ಹದಡದಿಂದ ಹೊಡೆಯಬೇಕು" volleyball!!
*ವಿದ್ಯಾಭಾರತಿ ಶಾಲೆಯ ಅರಳಿದ ಹೂಗಳು ನಾವು *

ಕವಳಿಹಣ್ಣು, color ice ಕಡ್ಡಿ, ನೆಲ್ಲಿಕಾಯಿ ಇಲೈಚಿಕಾಯಿ
ಕ್ಲಾಸ್ಸಲ್ಲಿ ಕದ್ದು ತಿಂದಿದ್ದು ಗೊತ್ತೇ ಆಗ್ಲಿಲ್ಲ...
ಪ್ರಿಯವಾದ annual day drama rehearsal
Jiski biwi lambi uska bhi bada naam hai!
ರಾಯರು ಬಂದರು ಮಾವನ ಮನೆಗೆ, ರಾಂಜಾನೆ, modern ರಾಮಾಯಣ!!
Creativity ಕಿಡಿ ಹಚ್ಚಿತ್ತು!
*ವಿದ್ಯಾಭಾರತಿ ಶಾಲೆಯ ಅರಳಿದ ಹೂಗಳು ನಾವು *

ಸರಸ್ವತಿ ಪೂಜೆ, send off, ಮತ್ತೆ ಯಾವಾಗ್ ಸಿಗ್ತೀವೋ ಗೊತ್ತಿಲ್ಲ,
ಕಣ್ಣ ಮುಂದೆ ಹಾಗೆ ಜಾರಿದ ದಿನಗಳು..
*ವಿದ್ಯಾಭಾರತಿ ಶಾಲೆಯ ಅರಳಿದ ಹೂಗಳು ನಾವು *


ಕಳೆದ ದಿನಗಳು ಬರದೇ ಇದ್ರು

ಜೊತೆ ಕಳೆದ ಸ್ನೇಹಿತರು ಮತ್ತೆ ಸಿಕ್ಕಾಗ
ಒಮ್ಮೆ ಹಿಂತುರುಗಿ ನೋಡಿ ನೆನಪು ಮೆಲಕುವ ಸುದಿನ...

ಒಂದರಿಂದ ಹತ್ತು ಹೀಗಿತ್ತು
ಜೀವನ ಪಾಠ ತಿಳಿದಿತ್ತು!!
                                                                                                                                                                                                                                                                                                                                                                                    ದೀಪು
I had written this poem dedicating to our beautiful school days on unforgettable reunion day(24th Nov 2019). Hope this refreshes your school days memories and wishing you to meet your friends soon J. If you like please share and give valuable comments. 


Comments

  1. This took me back to childhood days 🙂 I really miss reading these poems on your phone before getting it shared on any platform.

    ReplyDelete

Post a Comment