*ಸವಿ ನಿದ್ದೆ*


 
*ಸವಿ ನಿದ್ದೆ*
 

 ಮುದ್ದು ನಿದ್ದೆಗೆ
ಸಮಯದ ಅಳತೆ ಏಕೆ!
 
ಛಳಿಯ ನಡುಕಕೆ
ಎಣ್ಣೆ-ಬಿಸಿನೀರ ಅಭ್ಯಂಜನ
ಎಳೆಮೈ ತೀಡುವ ಅಜ್ಜಿಯ ಗಾಯನ 
ಮುದ್ದು ನಿದ್ದೆಗೆ ಸಮಯದ ಅಳತೆ ಏಕೆ!
 
ಬಟ್ಟಲುಗಣ್ಣಿಗೆ ತಿಳಿ ಕಾಡಿಗೆ
ನವಿರು ನೆತ್ತಿಗೆ ರೇಷ್ಮೆ ಕುಂಚಿಗೆ
ಕಣ್ಣು-ತುಂಬುವ ವರೆಗೆ
ಸಕ್ಕರೆ-ಗನಸು ಮುಗಿವವರೆಗೆ
ಮುದ್ದು ನಿದ್ದೆಗೆ ಸಮಯದ ಅಳತೆ ಏಕೆ!
 
ಬೆಚ್ಚಿ ಬೀಳಿಸುವ ಕನಸು
ಮುಗುಳ್ನಗಿಸುವ ಕನಸು
ಅಮ್ಮನೊಡಲು ಸಾಕಲ್ಲವೇ... 
ಸಮಯದ ಅಳತೆ ಏಕೆ  ಮುದ್ದು ನಿದ್ದೆಗೆ!
 
-ದೀಪು
 


 

 

Comments

Post a Comment